ಹೆಪಟೈಟಿಸ್ ಸಿ
ಬಗ್ಗೆ ಇನ್ನಷ್ಟು
ತಿಳಿಯಿರಿ

ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ
ಪರೀಕ್ಷಿಸಿಕೊಳ್ಳಿ,
ಗುಣಮುಖರಾಗಿ

ಹೆಪಟೈಟಿಸ್ ಸಿ ಗೆ ಯಾವುದೇ ಲಸಿಕೆ ಇಲ್ಲ ಆದರೆ ಇದಕ್ಕೆ ಚಿಕಿತ್ಸೆಯಿದೆ1

ಹೆಪಟೈಟಿಸ್ ಸಿ ಯಕೃತ್ತಿನ ಹಾನಿ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದು2

ಚಿಕಿತ್ಸೆಯು ಹೆಪಟೈಟಿಸ್ ಸಿ ವೈರಸ್ ಯನ್ನು ಹೊರಹಾಕಬಹುದು3

ಯಕೃತ್ತಿನ ಪ್ರಾಮುಖ್ಯತೆ4

ಯಕೃತ್ತು ನಿಮ್ಮ ಅತಿದೊಡ್ಡ ಆಂತರಿಕ ಅಂಗವಾಗಿದೆ ಮತ್ತು ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿದೆ. ಯಕೃತ್ತು ಈ ಕೆಳಗಿನವುಗಳನ್ನು ಒಳಗೊಂಡು, 500 ಕ್ಕಿಂತಲೂ ಹೆಚ್ಚು ಕಾರ್ಯಗಳನ್ನು ಮಾಡುತ್ತದೆ:

  • ಜೀರ್ಣಕ್ರಿಯೆಯಲ್ಲಿ ಕೊಬ್ಬಿನ ವಿಘಟನೆಯನ್ನು ಸರಾಗಗೊಳಿಸುವ ಪಿತ್ತರಸದ ಉತ್ಪಾದನೆ
  • ದೇಹದ ಮೂಲಕ ಕೊಬ್ಬುಗಳನ್ನು ಕೊಂಡೊಯ್ಯುವಲ್ಲಿ ಸಹಾಯಕವಾಗುವ, ಕೊಲೆಸ್ಟ್ರಾಲ್ ಮತ್ತು ವಿಶೇಷ ಪ್ರೊಟೀನುಗಳ ಉತ್ಪಾದನೆ.
  • ರಕ್ತದ ಪ್ಲಾಸ್ಮಾಕ್ಕಾಗಿ ನಿರ್ದಿಷ್ಟ ಪ್ರೊಟೀನುಗಳ ಉತ್ಪಾದನೆ.
  • ಅತಿಯಾದ ಗ್ಲುಕೋಸ್ ಅನ್ನು ಗ್ಲೈಕೊಜೆನ್ ಆಗಿ ಪರಿವರ್ತಿಸುವುದು (ಶಕ್ತಿಯ ಶೇಖರಣೆ).
  • ಗ್ಲುಕೋಸ್ ಮತ್ತು ಅಮೈನೊ ಆಸಿಡ್‌ಗಳ ರಕ್ತದ ಮಟ್ಟವನ್ನು ನಿಯಂತ್ರಿಸುವುದು.
  • ವಿವಿಧ ಔಷಧಗಳು ಮತ್ತು ಹಾನಿಕಾರಕ ವಸ್ತುಗಳಿಂದ ರಕ್ತದ ನಿರ್ವಿಷೀಕರಣ.
  • ಹೀಮೊಗ್ಲೊಬಿನ್ ಪರಿಷ್ಕರಿಸುವಿಕೆ ಮತ್ತು ಕಬ್ಬಿಣದ ಅಂಶದ ಶೇಖರಣೆ.
  • ಹಲವು ಹೆಪ್ಪುಗಟ್ಟುವಿಕೆಯ ಅಂಶಗಳನ್ನು ಉತ್ಪಾದಿಸುವ ಮೂಲಕ ರಕ್ತದ ಹೆಪ್ಪುಗಟ್ಟುವಿಕೆಯನ್ನು ಸರಾಗಗೊಳಿಸುವಿಕೆ.
  • ನಿರ್ದಿಷ್ಟ ಪ್ರತಿರಕ್ಷಣಾ ಅಂಶಗಳನ್ನು ಉತ್ಪಾದಿಸುವ ಮೂಲಕ ಮತ್ತು ರಕ್ತಪ್ರವಾಹದಿಂದ ಬ್ಯಾಕ್ಟಿರಿಯಾಗಳನ್ನು ತೆಗೆಯುವ ಮೂಲಕ ಸೋಂಕುಗಳ ವಿರುದ್ದ ಹೋರಾಡುವಲ್ಲಿ ಉಪಕರಿಸುವುದು.

ಹೆಪಟೈಟಿಸ್ ಎಂದರೇನು?

ಹೆಪಟೈಟಿಸ್ ಎಂದರೆ ಯಕೃತ್ತಿನ ಉರಿಯೂತ ಅತಿಯಾದ ಆಲ್ಕೊಹಾಲ್ ಬಳಕೆ, ವಿಷಕಾರಕಗಳು, ಕೆಲವು ಔಷಧಗಳು ಮತ್ತು ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳು ಹೆಪಟೈಟಿಸ್‌ಗೆ ಕಾರಣವಾಗುತ್ತವೆ. ಆದರೂ, ಹೆಪಟೈಟಿಸ್ ಹೆಚ್ಚಾಗಿ ಒಂದು ವೈರಸ್‌ನಿಂದಾಗಿ ಉಂಟಾಗುತ್ತದೆ2

ಹೆಪಟೈಟಿಸ್ ಸಿ ಎಂದರೇನು?

ಹೆಪಟೈಟಿಸ್ ಸಿ ಎಂಬುದು ಒಂದು ವೈರಸ್, ಸಂಕ್ಷಿಪ್ತವಾಗಿ ಇದನ್ನು ಹೆಚ್‌ಸಿವಿ ಎಂದು ಕರೆಯಲಾಗುತ್ತದೆ. ಹೆಚ್‌ಸಿವಿ ಯಕೃತ್ತಿಗೆ ಸೋಂಕುಂಟುಮಾಡುತ್ತದೆ ಮತ್ತು ಹೆಪಟೈಟಿಸ್‌ನಲ್ಲಿ ಫಲಿತವಾಗುತ್ತದೆ. ತೀಕ್ಷ್ಣ ಹೆಪಟೈಟಿಸ್ ಸಿ ಎಂದರೆ ಯಾರೊಬ್ಬರಿಗಾದರೂ ಸೋಂಕುಂಟಾದ ನಂತರದ ಮೊದಲ 6 ತಿಂಗಳುಗಳಾಗಿರುತ್ತವೆ.2 ತೀಕ್ಷ್ಣ ಹೆಚ್‌ಸಿವಿ ಹೊಂದಿರುವ ಸುಮಾರು 25% ಜನರು ಈ ಅವಧಿಯಲ್ಲಿ ಗುಣಮುಖರಾಗುತ್ತಾರೆ.5 ತೀಕ್ಷ್ಣ ಸೋಂಕಿನ ತೀವ್ರತೆಯು ಸ್ವಲ್ಪಮಟ್ಟಿಗೆ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ ಸೌಮ್ಯವಾದ ಅಸ್ವಸ್ಥತೆಯಿಂದ ಆಸ್ಪತ್ರೆಗೆ ಸೇರಿಸುವಷ್ಟರವರೆಗೆ ತೀವ್ರ ಅನಾರೋಗ್ಯದ ವ್ಯಾಪ್ತಿಯನ್ನು ಹೊಂದಿರಬಹುದು.2
ತೀಕ್ಷ್ಣ ಹೆಚ್‌ಸಿವಿ ಹೊಂದಿರುವ ಸುಮಾರು 75% ಜನರಿಗೆ ದೀರ್ಘಾವಧಿ ಅಥವಾ ತೀಕ್ಷ್ಣಹೆಚ್‌ಸಿವಿ ಬೆಳವಣಿಗೆಯಾಗುತ್ತದೆ.5 ಔಷಧೋಪಚಾರಗಳೊಂದಿಗೆ ಯಶಸ್ವಿಯಾಗಿ ಚಿಕಿತ್ಸೆನೀಡದಿದ್ದರೆ, ತೀಕ್ಷ್ಣವಾದ ಹೆಚ್‌ಸಿವಿ ಯಕೃತ್ತು, ಯಕೃತ್ತಿನ ಕ್ಯಾನ್ಸರ್, ಮತ್ತು ಯಕೃತ್ತಿನವೈಫಲ್ಯದ ಸಿರೋಸಿಸ್‌ಗೆ (ಸ್ಕಾರಿಂಗ್) ಕಾರಣವಾಗಬಹುದು.

ಹೆಚ್‌ಸಿವಿ ಸೋಂಕು ಭಾರತದಲ್ಲಿ ಎಷ್ಟು ಸಾಮಾನ್ಯವಾಗಿದೆ?

ಭಾರತದಲ್ಲಿ ಅಂದಾಜು 100 ವ್ಯಕ್ತಿಗಳಲ್ಲಿ ಒಬ್ಬರಿಗೆ ಹೆಚ್‌ಸಿವಿ ಸೋಂಕು ಉಂಟಾಗಿರಬಹುದು. 2014 ರಲ್ಲಿ ಭಾರತದಲ್ಲಿ 2,88,000 ಹೊಸ ಹೆಚ್‌ಸಿವಿ ಸೋಂಕುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ, ಹೆಚ್‌ಸಿವಿ ಸಂಬಂಧಿತ ಮರಣವು ಪ್ರತಿ ವರ್ಷ 96,000 ಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.6-8

ಹೆಚ್‌ಸಿವಿ ನಿಮ್ಮ ಯಕೃತ್ತಿಗೆ ಏನು ಮಾಡುತ್ತದೆ?

ಹೆಚ್‌ಸಿವಿ ಯೊಂದಿಗೆ ರೋಗದ ಪ್ರಗತಿ

ಆರೋಗ್ಯಕರ ಯಕೃತ್ತು

ಆರೋಗ್ಯಕರ ಯಕೃತ್ತು ಹಾನಿಗೊಂಡಾಗ ಮರಳಿ ಬೆಳೆಯುವ, ಅಥವಾ ಪುನರುತ್ಪಾದನೆಯ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ನಿಮ್ಮ ರಕ್ತವನ್ನು ಫಿಲ್ಟರ್ ಮಾಡುವ ಕಾರ್ಯನಿರ್ವಹಿಸುತ್ತದೆ, ಪೋಷಕಾಂಶಗಳನ್ನು ಪರಿಷ್ಕರಿಸುತ್ತದೆ ಮತ್ತು ಸೋಂಕುಗಳ ವಿರುದ್ದ ಹೋರಾಡುತ್ತದೆ.2,9

ಫಿಬ್ರೊಸಿಸ್

ಯಕೃತ್ತಿನ ರೋಗದಲ್ಲಿ, ಉರಿಯೂತದ ಯಕೃತ್ತು ಗಾಯಗೊಳ್ಳಲು ಪ್ರಾರಂಭಿಸುತ್ತದೆ. ಈ ಗಾಯದ ಅಂಗಾಂಶವು ಬೆಳೆಯುತ್ತದೆ ಮತ್ತು ಆರೋಗ್ಯಕರ ಯಕೃತ್ತಿನ ಅಂಗಾಂಶವನ್ನು ಪಲ್ಲಟಿಸುತ್ತದೆ. ಈ ಪ್ರಕ್ರಿಯೆಯನ್ನು ಫೈಬ್ರೊಸಿಸ್ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ, ನಿಮ್ಮ ಯಕೃತ್ತು ಆರೋಗ್ಯಕರ ಸ್ಥಿತಿಯಲ್ಲಿರುವಷ್ಟು ಅತ್ಯುತ್ತಮವಾಗಿ ಕಾರ್ಯನಿರ್ವಹಿಸದಿರಬಹುದು.9

ಸಿರೊಸಿಸ್

ಸಿರೊಸಿಸ್ ಎಂಬುದು ಯಕೃತ್ತಿನ ಗಾಯಗೊಳ್ಳುವಿಕೆಯಾಗಿದ್ದು, ಕಠಿಣ ಗಾಯದ ಅಂಗಾಂಶವು ಸೌಮ್ಯವಾದ ಆರೋಗ್ಯಕರ ಅಂಗಾಂಶವನ್ನು ಪಲ್ಲಟಿಸುತ್ತದೆ. ಈ ಹಂತದಲ್ಲಿ ಸಿರೊಸಿಸ್‌ಗೆ ಚಿಕಿತ್ಸೆ ನೀಡದಿದ್ದರೆ, ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಇದು ಯಕೃತ್ತಿನ ವೈಫಲ್ಯತೆಗೆ ಕಾರಣವಾಗಬಹುದು.9

ಕಾರ್ಸಿನೊಮಾ

ಹೆಪಟೊಸೆಲ್ಯುಲರ್ ಕಾರ್ಸಿನೊಮಾ (ಹೆಚ್‌ಸಿಸಿ) ಅಥವಾ ಯಕೃತ್ತಿನ ಕ್ಯಾನ್ಸರ್ ಪ್ರಾಥಮಿಕ ಯಕೃತ್ತಿನ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ವಿಧವಾಗಿದೆ. ಯಕೃತ್ತಿನಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ಅನ್ನು ಪ್ರಾಥಮಿಕ ಯಕೃತ್ತಿನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಇದು ಯಕೃತ್ತಿನಲ್ಲಿರುವ ಅನಾರೋಗ್ಯಕರ ಜೀವಕಣಗಳ ಬೆಳವಣಿಗೆ ಮತ್ತು ಹರಡುವಿಕೆಯಾಗಿದೆ.10

ಹೆಪಟೈಟಿಸ್ ಸಿ ಅಪಾಯವನ್ನು ಹೊಂದಿರುವವರು ಯಾರು?

ಸೋಂಕಿತ ವ್ಯಕ್ತಿಯಿಂದ ನಿಮ್ಮ ದೇಹಕ್ಕೆ ರಕ್ತವು ಪ್ರವೇಶಿಸಿದಾಗ ನಿಮಗೆ ಹೆಪಟೈಟಿಸ್ ಸಿ ಉಂಟಾಗುತ್ತದೆ. ಇದು ಈ ಕೆಳಗಿನ ಸಂದರ್ಭಗಳಲ್ಲಿ ಉಂಟಾಗಬಹುದು:

ಸೋಂಕಿತ ವ್ಯಕ್ತಿಯೊಂದಿಗೆ ಔಷಧದ ಸೂಜಿಗಳನ್ನು ನೀವು ಹಂಚಿಕೊಳ್ಳುವುದು.2,11-13

2001 ಕ್ಕಿಂತ ಮುಂಚೆ, ರಕ್ತವನ್ನು ಹೆಪಟೈಟಿಸ್ ಸಿ ಅಥವಾ ಇತರೆ ಸೋಂಕುಗಳಿಗಾಗಿ ನಿಯತವಾಗಿ ಪರೀಕ್ಷೆ ಮಾಡದಿದ್ದು ಆಗ ರಕ್ತವನ್ನು ಸ್ವೀಕರಿಸಿರುವುದು1,2,11-13

ನೀವು ಹೆಪಟೈಟಿಸ್ ಸಿ ಇರುವ ತಾಯಿಯ ಗರ್ಭದಲ್ಲಿ ಜನಿಸಿದ್ದಾಗ (ತಾಯಿಯಿಂದ ಮಗುವಿಗೆ ವರ್ಗಾವಣೆಗೊಳ್ಳುವ 5% ಅವಕಾಶಗಳಿವೆ).1,2,11-13

ಸೋಂಕಿತ ವ್ಯಕ್ತಿಯ ಮೇಲೆ ಬಳಸಲ್ಪಟ್ಟಿರುವ ಟ್ಯಾಟೂ ಅಥವಾ ಸ್ಟೀರಿಲೈಜ್‌ಮಾಡಿರದ ಪರಿಕರಗಳೊಂದಿಗೆ ಚುಚ್ಚಲ್ಪಟ್ಟಿದ್ದರೆ.1,2,11-13

ಒಬ್ಬ ಸೋಂಕಿತ ವ್ಯಕ್ತಿಯ ಮೇಲೆ ಬಳಸಲಾದ ಸೂಜಿಯಿಂದ ಆಕಸ್ಮಿಕವಾಗಿ ಚುಚ್ಚಿದ್ದರೆ.1,2,11-13

ಸೋಂಕಿತ ವ್ಯಕ್ತಿಯ ರೇಜರ್ ಅಥವಾ ಟೂತ್‌ಬ್ರಶ್ ಬಳಸುವುದು.1,2,11

ನೀವು ಎಂದಾದರೂ ಹೀಮೊಡಯಾಲಿಸಿಸ್ ಮಾಡಿಸಿಕೊಂಡಿದ್ದರೆ.2,12

ನೀವು ಎಂದಾದರೂ ಜೈಲಿನಲ್ಲಿ ಕೆಲಸ ಮಾಡಿದ್ದರೆ, ಅಥವಾ ಇದ್ದರೆ.2,12

ಅಪರೂಪವಾದ, ಹೆಪಟೈಟಿಸ್ ಸಿ ಯ ಲೈಂಗಿಕ ವರ್ಗಾವಣೆಯು ಸಾಧ್ಯವಿದೆ.1,2,11-13

ಸಾಮಾನ್ಯ ಆಹಾರಕ್ರಮ ಸಲಹೆಗಳು

ನಿಮ್ಮ ಆಹಾರಕ್ರಮವು ಇವುಗಳನ್ನು ಒಳಗೊಂಡಿರುವ ನಿಯತವಾದ ಮತ್ತು ಸಂತುಲಿತ ಆಹಾರವನ್ನು ಒಳಗೊಂಡಿರಬೇಕು:14

  • ಪೂರ್ಣ-ಧಾನ್ಯ ಬ್ರೆಡ್ ಮತ್ತು ಧಾನ್ಯಗಳು
  • ಮಾಂಸ, ಮೀನು, ಬೀಜಗಳು, ಮೊಟ್ಟೆ ಮತ್ತು ಹೈನು ಉತ್ಪನ್ನಗಳಂತಹಸಾಕಷ್ಟು ಪ್ರೊಟೀನಿನಿಂದ ಸಮೃದ್ಧವಾದ ಆಹಾರಗಳು.
  • ಹೆಚ್ಚು ತರಕಾರಿ ಮತ್ತು ಹಣ್ಣುಗಳ ಸೇವನೆ.
  • ಹೇರಳವಾದ ನೀರು (ದಿನಕ್ಕೆ ಕನಿಷ್ಠ 6 ರಿಂದ 8 ಲೋಟ ನೀರು).

ಇವುಗಳ ಬಳಕೆಯನ್ನು ಸೀಮಿತಗೊಳಿಸಿ ಅಥವಾ ತಪ್ಪಿಸಿ:

  • ಆಹಾರಕ್ರಮದಲ್ಲಿ ಅತಿಯಾದ ಉಪ್ಪು, ಸಕ್ಕರೆ ಮತ್ತು ಕೊಬ್ಬು.
  • ಆಲ್ಕೊಹಾಲ್ ಸೇವನೆ.

ಹೆಪಟೈಟಿಸ್ ಸಿ ಹೇಗೆ ಹರಡುವುದಿಲ್ಲ?

ಸೊಂಕಿತ ವ್ಯಕ್ತಿಯೊಂದಿಗೆ ಕೈಕುಲುಕುವುದು ಅಥವಾ ಕೈಗಳನ್ನು ಹಿಡಿದುಕೊಳ್ಳುವುದು1,15-16

ಎದೆಹಾಲು, ಆಹಾರ ಅಥವಾ ನೀರು1,15

ಕೆಮ್ಮು ಮತ್ತು ಸೀನುವಿಕೆಯ ಮೂಲಕ1-16

ಈಜುಕೊಳ ಮತ್ತು ಸೌನಾಗಳ ಬಳಕೆಯನ್ನು ಹಂಚಿಕೊಳ್ಳುವುದು1-16

ತಬ್ಬಿಕೊಳ್ಳುವುದು, ಮುತ್ತು ಕೊಡುವುದು ಮತ್ತು ಮುದ್ದಾಡುವುದು1-16

ಒಂದೇ ಪಾತ್ರೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು, ಒಂದೇ ಲೋಟದಲ್ಲಿ ನೀರು ಕುಡಿಯುವುದು1-16

ಶೌಚಾಲಯಗಳು ಮತ್ತು ಸ್ನಾನಗೃಹಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು1-16

ಬಟ್ಟೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು1-16

ನನಗೆ ಹೆಚ್‌ಸಿವಿ ಇದ್ದರೆ ಅದು ಹೇಗೆ ತಿಳಿಯಬೇಕು?

ನಿಮಗೆ ಹೆಚ್‌ಸಿವಿ ಇದ್ದರೆ ಅದನ್ನು ತಿಳಿದುಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಪರೀಕ್ಷಿಸಿಕೊಳ್ಳುವುದಾಗಿದೆ. ವೈದ್ಯರು ಎರಡು ವಿಧವಾದ ಪರೀಕ್ಷೆಗಳನ್ನು ಬಳಸಿ ಹೆಚ್‌ಸಿವಿ ರೋಗನಿರ್ಣಯ ಮಾಡುವರು.2,11

  • a. ವೈರಸ್‌ಗೆ ಪ್ರತಿಕ್ರಿಯೆಯಾಗಿ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಯಾರಿಸಲ್ಪಡುವ ಪ್ರೋಟೀನ್ಗಳಾದ ಪ್ರತಿಕಾಯಗಳಿಗಾಗಿ ರಕ್ತವನ್ನು ಪರೀಕ್ಷಿಸುವ ಪರೀಕ್ಷೆ.2,11
  • b. ಸ್ವತಃ ವೈರಸ್ ತಯಾರಿಸುವ ಆರ್‌ಎನ್‌ಎ ಎಂಬ ಪದಾರ್ಥವನ್ನು ಪರೀಕ್ಷಿಸುವ ಪರೀಕ್ಷೆ.2-11

ನಕಾರಾತ್ಮಕ ಪ್ರತಿಕಾಯ ಪರೀಕ್ಷೆಯನ್ನು ಪಡೆಯುವ ಹೆಚ್ಚಿನ ಜನರು ಹೆಚ್‌ಸಿವಿ ಸೋಂಕನ್ನು ಹೊಂದಿರುವುದಿಲ್ಲ ಮತ್ತು ಅವರಿಗೆ ಹೆಚ್ಚುವರಿ ಪರೀಕ್ಷೆಯ ಅಗತ್ಯವಿರುವುದಿಲ್ಲ.11

ಡಿಸ್‌ಕ್ಲೇಮರ್:

ಇಲ್ಲಿ ಪ್ರಕಟಿಸಿರುವ ವಿಷಯವು ಹೆಪಟೈಟಿಸ್‌ಗೆ ಸಂಬಂಧಿಸಿದ ಮಾಹಿತಿ ಮತ್ತು ಜ್ಞಾನದ ವರ್ಧನೆಯ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಿರುವಂತದು. ಯಾವುದೇ ಮೂರನೇ ಪಕ್ಷವನ್ನು ಸೂಚಿಸುವ ಯಾವುದೇ ಉಲ್ಲೇಖ ಮತ್ತು/ ಅಥವಾ ಲಿಂಕ್ ಮೈಲಾನ್‌ನ ಅನುಮೋದನೆ ಅಥವಾ ಖಾತರಿಯಾಗಿರುವುದಿಲ್ಲ. ಇಲ್ಲಿರುವ ಮಾಹಿತಿಯು ನಿಖರ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದ್ದರೂ,ಮೈಲಾನ್ ಯಾವುದೇ ಪ್ರಾತಿನಿಧ್ಯವನ್ನು ನೀಡುತ್ತಿರುವುದಿಲ್ಲ ಅಥವಾ ಇಲ್ಲಿ ವಿವರಿಸಿದ ವಿಷಯದ ಮೂಲಕ ಪ್ರಸಾರವಾಗುವ ಯಾವುದೇ ಮಾಹಿತಿಯ ನಿಖರತೆಗೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವುದಿಲ್ಲ ಮತ್ತು ಇಲ್ಲಿ ಒದಗಿಸಲಾದ ಯಾವುದೇ ಮಾಹಿತಿಯ ಬಳಕೆಯಿಂದ ಉಂಟಾಗುವ ಯಾವುದೇ - ಕಾನೂನಾತ್ಮಕ ಅಥವಾ ಕಾನೂನಾತ್ಮಕವಲ್ಲದ - ದೋಷ, ಲೋಪ ಮತ್ತು ಪರಿಣಾಮಗಳಿಗೆ ಜವಾಬ್ದಾರನಾಗಿರುವುದಿಲ್ಲ ಮತ್ತು ಅದರಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ.

ಹೆಪಟೈಟಿಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮಗೆ ಮಾರ್ಗದರ್ಶನ ನೀಡಲು ಅತ್ಯುತ್ತಮ ವ್ಯಕ್ತಿಯೆಂದರೆ ನಿಮ್ಮ ವೈದ್ಯರು. ಇಲ್ಲಿ ಒದಗಿಸಲಾದ ಮಾಹಿತಿಯು ನಿಮ್ಮ ವೈದ್ಯರು ನೀಡುವ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿರುವುದಿಲ್ಲ

References:

  1. 1. NHS Hepatitis C Symptoms. Available from: http://www.nhs.uk/Conditions/Hepatitis-C/Pages/Symptoms aspx. Accessed on 22nd February 2015.
  2. 2. CDC, Hepatitis C General information. Available from: http://www.cdc.gov/hepatitis/HCV/PDFs/HepCZGeneralFactSheet.pdf. Accessed on 22nd March 2015.
  3. 3. Treatment of Hepatitis C Up to date. Available at https://www.uptodate.com/contents/hepatitis-c-beyond-thebasics#H17555986. Accessed on 17th Dec 2018.
  4. 4. Health library. Liver Anatomy and Functions. Johns Hopkins Medicine. Available at https://www.hopkingmedicine.org/healthbrary/conditions/liverbillary_and_pancreatic_disorders/liver_anatomy_and_functions_85,P00676. Accessed on 26th Dec. 2018.
  5. 5. Behzad Hajarizadeh, Jason Grebely. Gregory J. Dore. Epideminology and natural history of HCV infection. Nat Rev Gastroentrola Hepatol 2013;10(9):553-62.
  6. 6. Puri P. Anand AC, Saraswat VA, Acharya SK, Dhiman RK, Aggrawal R. et. at. Consensus Statement of HCV Task Force of the Indian National Association for Study of the Liver (NASL). Part I: Status Report of HCV infection in India. J Clin Exp. Hepatol 2014;4(2):106-116.
  7. 7. Dhiman RK. Future of therapy for Hepatitis C in India. A matter of Accessibility and Affordibility ? J Clin Exp Hepatol 2014:4(2) 85-6.
  8. 8. Amirthalingam R and Pavalakodi VN. Prevalence of HIV 1, HCV and HBV infections among inhabitants in Chennai City at Hi-tech Center, Tamil-Nadu-India Medical Science 2013;3(8)24-28.
  9. 9. The progression of Liver Disease. American Liver Foundation. Available at https://liverfoundation.org./forpatients/about the-river/the-progression-of-river-disease/#1503432164252-f19f7e9c-0374. Accessed on 20th Dec 2018.
  10. 10. Liver Cancer American Liver Foundation. Available at https://liverfoundation.org/for/patients/about-the-river/disease-of the liver/liver-cancer/ Accessed on 20th Dec 2018.
  11. 11. Chopra S. Patient education: Hepatitis C (Beyond the Basics) Up To Date. Available from http://www.uptodate.com/contents/hepatitis-c-beyond-the basics. Accessed on 22nd March 2015.
  12. 12. NIH. What I need to know about Hepatitis C. Available from http://www.niddk.nih.gov/health/information/health - topics/liver-disease/hepatitis-c-Pages/ez.aspx. Accessed on 22nd March 2014.
  13. 13. CDC Hepatitis C Information for the Public. Available from : http://www.cdc.gov/hepatitis/c/cfaq.htm.
  14. 14. Viral Hepatitis, Diet and Nutrition: Entire Lesson. United States Department of Veterans Affairs. Available at https://www.hepatitis.va.gov/patient/daily/diet/single-page.asp. Accessed on 26th Dec 2018.
  15. 15. Hepatitis C. Key Facts World Health Organization, Retrieved from https://www.who.int/news-room/factsheets/detail/hepatitis-c. Accessed on 11th Dec 2018.
  16. 16. How hepatitis C is not transmitted. Hepatitis C: Transmission and prevention. infohep. Available at http://www.infohep.org/How-hepatitis-C-is-not-transmitted/page/2620968. Accessed on 11th Dec. 2018.