ತೀವ್ರವಾದ ಹೆಪಟೈಟಿಸ್ ಬಿ ಎಂಬುದು ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ಮೊದಲ ಆರು ತಿಂಗಳೊಳಗೆ ಸಂಭವಿಸುವ ಒಂದು ಅಲ್ಪಾವಧಿಯ ಸೋಂಕನ್ನು ಸೂಚಿಸುತ್ತದೆ. ಈ ಸೋಂಕಿನ ತೀವ್ರತೆಯು ಸ್ವಲ್ಪಮಟ್ಟಿಗೆ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ ಸೌಮ್ಯವಾದ ಅಸ್ವಸ್ಥತೆಯಿಂದ ಆಸ್ಪತ್ರೆಗೆ ಸೇರಿಸುವಷ್ಟರವರೆಗೆ ತೀವ್ರ ಅನಾರೋಗ್ಯದ ವ್ಯಾಪ್ತಿಯನ್ನು ಹೊಂದಿರಬಹುದು.1
ದೀರ್ಘಕಾಲದ ಹೆಪಟೈಟಿಸ್ ಬಿ ಎಂಬುದು ಹೆಪಟೈಟಿಸ್ ಬಿ ವೈರಾಣುವಿನಿಂದಾಗುವ ಜೀವನದುದ್ದಕ್ಕೂ ಇರುವ ಸೋಂಕನ್ನು ಸೂಚಿಸುತ್ತದೆ. ಹೆಪಟೈಟಿಸ್ ಬಿ ವೈರಸ್ ಸೋಂಕಿಗೊಳಗಾದ 90% ಶಿಶುಗಳು ತೀವ್ರವಾದ ಸೋಂಕಿಗೆ ತುತ್ತಾಗುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸುಮಾರು 5% ರಷ್ಟು ವಯಸ್ಕರು ದೀರ್ಘಕಾಲದ ಹೆಪಟೈಟಿಸ್ ಬಿ ಗೆ ಒಳಗಾಗುತ್ತಾರೆ. ಸಮಯ ಸರಿದಂತೆ ದೀರ್ಘಕಾಲದ ಹೆಪಟೈಟಿಸ್ ಬಿ ಯಕೃತ್ತಿನ ಹಾನಿ, ಸಿರೋಸಿಸ್, ಯಕೃತ್ತಿನ ಕ್ಯಾನ್ಸರ್ ಮತ್ತು ಸಾವನ್ನೂ ಒಳಗೊಂಡಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.1
ಭಾರತದಲ್ಲಿ ಹೆಪಟೈಟಿಸ್ ಬಿ ಸೋಂಕು ಎಷ್ಟು ಸಾಮಾನ್ಯವಾಗಿದೆ?
ಜಾಗತಿಕವಾಗಿ, ವಿಶ್ವದಾದ್ಯಂತ ಸುಮಾರು 240 ಮಿಲಿಯನ್ ಜನರು ಹೆಪಟೈಟಿಸ್ ಬಿ ವೈರಸ್ (ಎಚ್‌ಬಿವಿ) ಸೋಂಕಿಗೆ ಒಳಗಾಗಿದ್ದಾರೆ. ಭಾರತವು ಸುಮಾರು ಎಚ್‌ಬಿವಿ ವಾಹಕ ಪ್ರಮಾಣವನ್ನು 3.0% ರಷ್ಟು ಹೊಂದಿದ್ದು ಇದು ಬುಡಕಟ್ಟು ಜನಾಂಗದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. 1.25 ಶತಕೋಟಿಗಿಂತ ಹೆಚ್ಚು ಜನಸಂಖ್ಯೆಯೊಂದಿಗೆ, ಭಾರತವು 37 ಮಿಲಿಯನ್ ಎಚ್‌ಬಿವಿ ವಾಹಕಗಳನ್ನು ಹೊಂದಿದೆ ಮತ್ತು ಒಟ್ಟಾರೆ ಎಚ್‌ಬಿವಿ ರೋಗಿಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ.2
ಹೆಪಟೈಟಿಸ್ ಬಿ ಗೆ ಕಾರಣವೇನು?
ಹೆಪಟೈಟಿಸಿ ಬಿ ವೈರಸ್, ಹೆಪಟೈಟಿಸ್ ಬಿ ಯನ್ನು ಉಂಟುಮಾಡುತ್ತದೆ. ಹೆಪಟೈಟಿಸ್ ಬಿ ವೈರಸ್ ಸೋಂಕಿತ ವ್ಯಕ್ತಿಯ ರಕ್ತ, ವೀರ್ಯ ಅಥವಾ ದೇಹದ ಇತರ ದ್ರವಗಳ ಮೂಲಕ ಹೆಪಟೈಟಿಸ್ ಬಿ ವೈರಸ್ ಹರಡುತ್ತದೆ. ಸಂಪರ್ಕವು ಇವುಗಳಿಂದ ಸಂಭವಿಸಬಹುದು.3
- ಹೆಪಟೈಟಿಸ್ ಬಿ ಹೊಂದಿರುವ ತಾಯಿಗೆ ಹುಟ್ಟಿರುವುದು
- ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸುವುದು
- ಸೋಂಕಿತ ವ್ಯಕ್ತಿಯೊಂದಿಗೆ ಸೂಜಿಗಳನ್ನು ಅಥವಾ ಇತರ ಔಷಧ ವಸ್ತುಗಳನ್ನು ಹಂಚಿಕೊಳ್ಳುವುದು
- ಸೋಂಕಿತ ವ್ಯಕ್ತಿಯ ಮೇಲೆ ಪ್ರಯೋಗಿಸಲಾಗಿರುವ ಸೂಜಿಯಿಂದ ಅಕಸ್ಮಾತ್ ಚುಚ್ಚಿಕೊಳ್ಳುವುದು
- ಸೊಂಕಿತ ವ್ಯಕ್ತಿಯು ಬಳಸಿದ ಮತ್ತು ಸೂಕ್ತವಾಗಿ ಸ್ಟೆರಿಲೈಸ್ ಮಾಡದೇ ಇರುವ ಅಥವಾ ಎಲ್ಲಾ ವೈರಸ್‌ಗಳು ಮತ್ತು ಇತರ ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸುವ ರೀತಿಯಲ್ಲಿ ಸ್ವಚ್ಛಗೊಳಿಸದೇ ಇರುವ ಸಾಧನಗಳಿಂದ ಹಚ್ಚೆ ಹಾಕಿಸಿಕೊಳ್ಳುವುದು ಅಥವಾ ಚುಚ್ಚಿಸಿಕೊಳ್ಳುವುದು
- ಸೋಂಕಿತ ವ್ಯಕ್ತಿಯ ರಕ್ತ ಅಥವಾ ತೆರೆದ ಗಾಯಗಳ ಸಂಪರ್ಕಕ್ಕೆ ಒಳಗಾಗುವುದು
- ಸೋಂಕಿತ ವ್ಯಕ್ತಿಯ ರೇಝರ್, ಟೂಥ್‌ಬ್ರಶ್ ಅಥವಾ ಉಗುರಿನ ಕ್ಲಿಪ್ಪರ್‌ಗಳನ್ನು ಬಳಸುವುದು
ಹೆಪಟೈಟಿಸ್ ಬಿ ಯನ್ನು ಹೇಗೆ ಚಿಕಿತ್ಸೆ ಮಾಡಲಾಗುತ್ತದೆ?
ತೀವ್ರವಾದ ಹೆಪಟೈಟಿಸ್ ಬಿ ಹೊಂದಿರುವವರಿಗೆ, ವೈದ್ಯರು ಸಾಮಾನ್ಯವಾಗಿ ವಿಶ್ರಾಂತಿ ಪಡೆಯಲು ಸಾಕಷ್ಟು ಪೌಷ್ಟಿಕಾಂಶ ಹಾಗೂ ದ್ರವಪದಾರ್ಥಗಳನ್ನು ಸೇವಿಸಲು, ಮತ್ತು ನಿಕಟವಾದ ವೈದ್ಯಕೀಯ ನಿಗಾವಣೆಯನ್ನು ಹೊಂದಲು ಶಿಫಾರಸು ಮಾಡುತ್ತಾರೆ. ಕೆಲವು ಜನರನ್ನು ಆಸ್ಪತ್ರೆಗೆ ಸೇರಿಸುವುದು ಅಗತ್ಯವಾಗಬಹುದು. ದೀರ್ಘಕಾಲದ ಹೆಪಟೈಟಿಸ್ ಬಿ ಹೊಂದಿರುವ ಜನರನ್ನು ಯಕೃತ್ತಿನ ಸಮಸ್ಯೆಗಳಿಗಾಗಿ ಮೌಲ್ಯಮಾಪನ ಮಾಡಬೇಕು ಮತ್ತು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಬೇಕು. ಹೆಪಟೈಟಿಸ್‌ನ ದುಷ್ಪರಿಣಾಮಗಳನ್ನು ನಿಧಾನಗೊಳಿಸುವ ಅಥವಾ ತಡೆಗಟ್ಟುವ ಚಿಕಿತ್ಸೆಗಳು ಲಭ್ಯವಿವೆ!1
ನಾನು ಹೆಪಟೈಟಿಸ್ ಬಿ ಹೊಂದಿರುವುದನ್ನು ತಿಳಿಯುವುದು ಹೇಗೆ?
ನಿಮ್ಮ ವೈದ್ಯಕೀಯ ಮತ್ತು ಕೌಟುಂಬಿಕ ಹಿನ್ನೆಲೆ, ದೈಹಿಕ ಪರೀಕ್ಷೆ ಮತ್ತು ರಕ್ತ ಪರೀಕ್ಷೆಗಳ ಆಧಾರದ ಮೇಲೆ ವೈದ್ಯರು ಹೆಪಟೈಟಿಸ್ ಬಿ ಯನ್ನು ಪತ್ತೆ ಮಾಡುತ್ತಾರೆ. ನೀವು ಹೆಪಟೈಟಿಸ್ ಬಿ ಹೊಂದಿದ್ದರೆ, ನಿಮ್ಮ ವೈದ್ಯರು ನಿಮ್ಮ ಯಕೃತ್ತಿನ ಬದಲಾಗುತ್ತಿರುವ ಎಲಾಸ್ಟೋಗ್ರಫಿ, ಯಕೃತ್ತಿನ ಅಲ್ಟ್ರಾಸೌಂಡ್ ಮತ್ತು ಯಕೃತ್ತಿನ ಬಯೋಪ್ಸಿಯಂತಹ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬಹುದು!3
ಹೆಪಟೈಟಿಸ್ ಬಿ ಯನ್ನು
ತಡೆಗಟ್ಟಬಹುದೇ?
ಹೌದು. ಹೆಪಟೈಟಿಸ್ ಬಿ ಯನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು. ಹೆಪಟೈಟಿಸ್ ಬಿ ಲಸಿಕೆಯನ್ನು ಸಾಮಾನ್ಯವಾಗಿ 6 ತಿಂಗಳ ಅವಧಿಯಲ್ಲಿ 3 ಚುಚ್ಚುಮದ್ದುಗಳ ಮೂಲಕ ನೀಡಲಾಗುತ್ತದೆ. ದೀರ್ಘಕಾಲಿಕ ರಕ್ಷಣೆಗಾಗಿ ಎಲ್ಲಾ ಲಸಿಕೆಗಳನ್ನೂ ಪಡೆಯುವುದು ಅಗತ್ಯ.1
ನಿಮ್ಮನ್ನು ಪರೀಕ್ಷಿಸಿಕೊಳ್ಳಿ
ದಯವಿಟ್ಟು ಗಮನಿಸಿ: ನಿಮಗೆ ಮಾರ್ಗದರ್ಶನ ನೀಡುವುದಕ್ಕೆ ನಿಮ್ಮ ವೈದ್ಯರೇ ಅತ್ಯುತ್ತಮವಾದ ವ್ಯಕ್ತಿ. ಈ ತಿಳುವಳಿಕೆ ಕೈಪಿಡಿಯಲ್ಲಿರುವ ಮಾಹಿತಿಯು ನಿಮ್ಮ ವೈದ್ಯರು ನೀಡಿದ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿರುವುದಿಲ್ಲ. ನಿಮ್ಮ ವೈದ್ಯಕೀಯ ಸ್ಥಿತಿಯ ಬಗ್ಗೆ ಯಾವುದೇ ಪ್ರಶ್ನೆ ಇದ್ದರೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯಸೇವೆ ಪೂರೈಕೆದಾರರನ್ನು ಕೇಳಿರಿ.
ಡಿಸ್‌ಕ್ಲೇಮರ್:
ಇಲ್ಲಿ ಪ್ರಕಟಿಸಿರುವ ವಿಷಯವು ಹೆಪಟೈಟಿಸ್‌ಗೆ ಸಂಬಂಧಿಸಿದ ಮಾಹಿತಿ ಮತ್ತು ಜ್ಞಾನದ ವರ್ಧನೆಯ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಿರುವಂತದು. ಯಾವುದೇ ಮೂರನೇ ಪಕ್ಷವನ್ನು ಸೂಚಿಸುವ ಯಾವುದೇ ಉಲ್ಲೇಖ ಮತ್ತು/ ಅಥವಾ ಲಿಂಕ್ ಮೈಲಾನ್‌ನ ಅನುಮೋದನೆ ಅಥವಾ ಖಾತರಿಯಾಗಿರುವುದಿಲ್ಲ. ಇಲ್ಲಿರುವ ಮಾಹಿತಿಯು ನಿಖರ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದ್ದರೂ,ಮೈಲಾನ್ ಯಾವುದೇ ಪ್ರಾತಿನಿಧ್ಯವನ್ನು ನೀಡುತ್ತಿರುವುದಿಲ್ಲ ಅಥವಾ ಇಲ್ಲಿ ವಿವರಿಸಿದ ವಿಷಯದ ಮೂಲಕ ಪ್ರಸಾರವಾಗುವ ಯಾವುದೇ ಮಾಹಿತಿಯ ನಿಖರತೆಗೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವುದಿಲ್ಲ ಮತ್ತು ಇಲ್ಲಿ ಒದಗಿಸಲಾದ ಯಾವುದೇ ಮಾಹಿತಿಯ ಬಳಕೆಯಿಂದ ಉಂಟಾಗುವ ಯಾವುದೇ - ಕಾನೂನಾತ್ಮಕ ಅಥವಾ ಕಾನೂನಾತ್ಮಕವಲ್ಲದ - ದೋಷ, ಲೋಪ ಮತ್ತು ಪರಿಣಾಮಗಳಿಗೆ ಜವಾಬ್ದಾರನಾಗಿರುವುದಿಲ್ಲ ಮತ್ತು ಅದರಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ.
ಹೆಪಟೈಟಿಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮಗೆ ಮಾರ್ಗದರ್ಶನ ನೀಡಲು ಅತ್ಯುತ್ತಮ ವ್ಯಕ್ತಿಯೆಂದರೆ ನಿಮ್ಮ ವೈದ್ಯರು. ಇಲ್ಲಿ ಒದಗಿಸಲಾದ ಮಾಹಿತಿಯು ನಿಮ್ಮ ವೈದ್ಯರು ನೀಡುವ ವೈದ್ಯಕೀಯ ಸಲಹೆಗೆ ಪರ್ಯಾಯವಾಗಿರುವುದಿಲ್ಲ